SLIDE1

Wednesday, August 26, 2020

ಅಕ್ಟೋಬರ್‌ 1 ರಿಂದ ಶಾಲಾ ಕಾಲೇಜು ಪುನರಾರಂಭಿಸಲು ನಿರ್ಧಾರ

ಅಕ್ಟೋಬರ್‌ 1 ರಿಂದ ಶಾಲಾ ಕಾಲೇಜು ಪುನರಾರಂಭಿಸಲು ನಿರ್ಧಾರ 


ಅಕ್ಟೋಬರ್‌ 1 ರಿಂದ ಶಾಲಾ ಕಾಲೇಜು ಪನರಾರಂಭಿಸಲು ಸರ್ಕಾರ ನಿರ್ಧರಿಸಿದೆ. ಕರೊನಾ ವೈರಸ್‌ 

ಸೊಂಕಿನ ನಡುವೆಯು ಉನ್ನತ ಶಿಕ್ಷಣ ಇಲಾಖೆ ಕಾಲೇಜು ಗಳನ್ನು ಪುನರಾರಂಭಿಸಲು ಮುಂದಾಗಿದೆ. 

ಸುರಕ್ಷಿತ ಕ್ರಮಗಳನ್ನು ಕೈಗೊಂಡು ತರಗತಿಗಳನ್ನು ನಡೆಸಲು ಯುಜಿಸಿ ಸೂಚಿಸಿರುವುದರಿಂದ ಈ 

ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ಸೆಪ್ಟೆಂಬರ್‌ ಅಂತ್ಯದಿಂದಲೇ ಶಾಲಾ ಕಾಲೇಜುಗಳಿಗೆ ಕರೊನಾ ಪ್ರಭಾವದಿಂದಾಗಿ ರಜೆ 

ಘೊಸಿಸಲಾಗಿತ್ತು. ಈಗ 3.O ಲಾಕ್‌ ಡೌನ್‌ ಅಂತ್ಯವಾಗಲಿದ್ದು ಸೆಪ್ಟೆಂಬರ್‌ ತಿಂಗಳಿನಿಂದಲೆ
ರಾಜ್ಯದಲ್ಲಿ  ಶಾಲೆಗಳು ಆರಂಭಿಸಬೇಕು ಎನ್ನುವ ಚಿಂತನೆಯು ನಡೆದಿದೆ.

google

ಈಗಲೂ ಸಹ ರಾಜ್ಯದಲ್ಲಿ ಕರೊನಾ ಸೊಂಕಿನ ಪ್ರಭಾವ ದಿನೆ ದಿನೆ ಹಿಚ್ಚುತ್ತಲೆ ಇದೆ, ಈ ಮಧ್ಯೆಯು 

ಶಾಲೆಗಳನ್ನು ಆರಂಭಿಸಿ 4 ಗಂಟೆಗಳ ಕಾಲ ಬೋಧನೆಗೆ ಅವಕಾಶ ನೀಡಿ , ಶೈಕ್ಷಣಿಕ ಕಾರ್ಯಗಳಿಗೆ 

ಅವಕಾಶ ನೀಡಲು ಸರ್ಕಾರ ಮುಂದಾಗಿದೆ.

ಸೊಂಕು ತಡೆಗಟ್ಟುವ ಕ್ರಮಗಳನ್ನು ಶಾಲೆಗಳಲ್ಲಿ ಕೈಕೊಳ್ಳಬೇಕಾಗಿದೆ ವಿದ್ಯಾರ್ಥಿಗಳ ಸುರಕ್ಷತೆಗೆ 

ಮಾಸ್ಕ್‌ ಮತ್ತು ಹ್ಯಾಂಡ್‌ ಗ್ಲೌಸ್‌ ಗಳ ಬಳಕೆ ಹಾಗೆ ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರ 

ಕಾಯ್ದುಕೊಳ್ಳುವದು ಮುಖ್ಯವಾಗಿದೆ.
google

ಮೊದಲಿಗೆ ಪದವಿ ತರಗತಿಗಳನ್ನು ಆರಂಭಿಸಿ ಹಂತ ಹಂತ ವಾಗಿ ಎಲ್ಲಾ ತರಗತಿಗಳನ್ನು 

ಆರಂಭಿಸಬೇಕಾಗಿದೆ. ಸೆಪ್ಟೆಂಬರ್‌ 1 ರಿಂದ ಕಾಲೇಜು ತರಗತಿಗಳನ್ನು ಆನ್‌ ಲೈನ್‌ ನಲ್ಲಿ 

ನಡೆಸಲಾಗುತ್ತದೆ ಎಂದು ತಿಳಿದು ಬಂದಿರುತ್ತದೆ.

ಆದರೆ ಇದರ ಕುರಿತಾಗಿ ಯಾವುದೇ ಅಧಿಕೃತ ಆದೇಶ ಹೊರಬಂದಿರುವುದಿಲ್ಲ.

ಕಾಲೇಜುಗಳ ಆರಂಭಕ್ಕೆ ಕೇಂದ್ರ ಸರ್ಕಾರವು ಸಹ ಮಾರ್ಗಸೂಚಿಯನ್ನು ಹೊರಡಿಸುವ ಸಾದ್ಯತೆ ಇದೆ. 


0 Comments:

Post a Comment